ಐಎನ್‌ಹೆಚ್‌ಎಸ್ ಪತಂಜಲಿ ಭಾರತೀಯ ನೌಕಾಪಡೆಯ ನೌಕಾ ಆಸ್ಪತ್ರೆಯಾಗಿದ್ದು, ಕರ್ನಾಟಕ ರಾಜ್ಯದ ಕಾರವಾರದಲ್ಲಿ ೨೬ನೇ ಡಿಸೆಂಬರ್ ೨೦೦೬ ರಂದು ಕಾರ್ಯಾರಂಭ ಮಾಡಿತು. ಇದು ಕಾರವಾರದಲ್ಲಿ ಕಟ್ಟಲ್ಪಟ್ಟ ನೌಕಾಸೇನೆಯ ಎರಡನೆಯ ಕೇಂದ್ರವಾಗಿದ್ದು- ಇನ್ನೊಂದು ಐಎನ್‌ಎಸ್ ಕದಂಬ ನೌಕಾನೆಲೆ- ಸಧ್ಯಕ್ಕೆ ೧೪೧ ಹಾಸಿಗೆಗಳ ಸಾಮರ್ಥ್ಯವನ್ನು ಈ ಆಸ್ಪತ್ರೆಯು ಹೊಂದಿದೆ. ಅಲ್ಲದೆ, ೪೦೦ ಹಾಸಿಗೆವರೆಗೆ ವಿಸ್ತರಿಸಬಹುದಾದ ಸಾಮರ್ಥ್ಯ ಈ ಆಸ್ಪತ್ರೆಗೆ ಇದೆ. == ಉದ್ದೇಶ == ಕಾರವಾರವು ಪಶ್ಚಿಮ ಸಮುದ್ರ ತೀರದಲ್ಲಿರುವ ಭಾರತೀಯ ನೌಕಾಪಡೆಯ ಪ್ರಧಾನ ನೆಲೆಯಾಗಿದೆ. ಕಾರವಾರ ಮತ್ತು ಹತ್ತಿರದ ಇತರ ಜಾಗಗಳಲ್ಲಿ ನೆಲೆಯಾಗಿರುವ ನೌಕಾ ಸಿಬಂದಿಗಳ ವೈದ್ಯಕೀಯ ನೆರವು ನೀಡಲು ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಅಲ್ಲದೆ, ಇದು ನೌಕಾಪಡೆಯ ಎಲ್ಲಾ ಸೈನಿಕರು ಮತ್ತು ಕುಟುಂಬಗಳು, , , ಕೋಸ್ಟ್ ಗಾರ್ಡ್, ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ಆರೈಕೆಯನ್ನು ಒದಗಿಸುತ್ತದೆ. ಅಗತ್ಯವಿದ್ದಾಗ ತುರ್ತು ವೈದ್ಯಕೀಯ ಸೇವೆಗಳನ್ನು ನಾಗರಿಕರಿಗೂ ವಿಸ್ತರಿಸಬಹುದಾಗಿದೆ. == ಹೆಚ್ಚಿನ ಓದಿಗೆ == ಭಾರತೀಯ ನೌಕಾಪಡೆ ಭಾರತದಲ್ಲಿರುವ ಮಿಲಿಟರಿ ಆಸ್ಪತ್ರೆಗಳು == ಉಲ್ಲೇಖ ==